Repeat - ಪಾತ್ರೆ ಮರಿ ಇಟ್ಟ ಕತೆ
Listen now
Description
ಕೇಳಿರೊಂದು  ಕಥೆಯ  ಸರಣಿಯ  ಕತೆಗಳಲ್ಲಿ  ನಾಸ್ರುದ್ದೀನ್  ಹೊಡ್ಜಾನ ಕತೆಗಳು ಅತಿ  ಜನಪ್ರಿಯ.  2019 ರಲ್ಲಿ ಪ್ರಕಟವಾಗಿದ್ದ  ಈ ಕತೆಯ ಮರು  ಪ್ರಸಾರ .  ನಾಸ್ರುದ್ದೀನ್ ಹೊಡ್ಜ ಪಕ್ಕದ ಮನೆಯವನ ಹತ್ತಿರ ಪಾತ್ರೆ ಸಾಲ ಪಡೆದು ವಾಪಸ್ ಕೊಡುವಾಗ ಪಾತ್ರೆ ಅಷ್ಟೇ ಅಲ್ದೆ ಅದರ 'ಮರಿ ' ಯನ್ನೂ ಹೇಗೆ ಕೊಡಲು ಸಾಧ್ಯ ? ಪಾತ್ರೆ ಎಲ್ಲಾದ್ರೂ ಮರಿ ಇಡುತ್ಯೆ ? ಆದರೆ ' ಕೊಟ್ಟೋನು ಕೋಡಂಗಿ! ಇಸ್ಕೊಂಡೋನು ಈರಭದ್ರ " ಅನ್ನೋ ಗಾದೆಯ ಹಾಗೆ , ಆ ಪಕ್ಕದ ಮನೆಯವನಿಗಾದ್ರೂ ಗೊತ್ತಾಗಬೇಡವೇ  ?  ಹೊಡ್ಜ ಯಾಕೆ ಹೀಗೆ ಮಾಡಿದ , ಮುಂದೇನಾಯ್ತು ಅನ್ನೋದನ್ನು ಈ ಕತೆಯಲ್ಲಿ ಕೇಳಿ  .   
More Episodes
ಮಕ್ಕಳೆಂದರೆ ಕುತೂಹಲ , ಕುತೂಹಲ ಅಂದರೆ ಮಕ್ಕಳು .  ದುಬಾರಿಯಾದ ಆಟದ ಸಾಮಾನಿರಲಿ ,  ಮೂಲೆಯಲ್ಲಿ ಬಿದ್ದಿರೋ  ಕಲ್ಲಿರಲಿ , ಮಕ್ಕಳಿಗೆ  ಎಲ್ಲವೂ ಆಕರ್ಷಕ ಅಂತಲೇ ತೋರುತ್ತದೆ .  ಒಮ್ಮೆ , ಶಾಲೆಯಲ್ಲಿ ಆಟ ಆಡ್ತಿದ್ದ ಮಕ್ಕಳಿಗೆ ಒಂದು ವಿಚಿತ್ರ ಪ್ರಾಣಿ ಕಣ್ಣಿಗೆ ಬಿತ್ತು .  ಕೊಂಬೆಯಿಂದ ಕೊಂಬೆಗೆ ಜಿಗಿಯುತ್ತಿದ್ದ ಈ ಪ್ರಾಣಿಯು ಮಕ್ಕಳಿಗೆ ಆಟದ ಸಾಮಾನಿನ ತರಹ ತೋರಿತು...
Published 07/19/21
ಕಥೆಯ ಶೀರ್ಷಿಕೆ ವಿಚಿತ್ರ ಅನ್ನಿಸುತ್ತಾ ?  ಹೌದು .. ರಾಮಾಯಣದ  ಈ ಅಪರೂಪದ ಕತೆ ಕೇಳೋಕೆ ಬಹು ಮಜಾ . ಜತೆಗೆ , ಹನುಮಂತ ಹಾಗೂ ರಾಮನ ಗೆಳೆತನ ಎಷ್ಟು ಗಾಢವಾಗಿತ್ತು ಅನ್ನುವುದಕ್ಕೆ ಸಾಕ್ಷಿ ಕೂಡ .     
Published 07/11/21