Surah 94 Al-Inshirah ಅಧ್ಯಾಯ 94: ಅಲ್ ಇನ್‌ಶಿರಾಹ್ (ವಿಸ್ತರಣೆ)
Listen now
Description
ಅಧ್ಯಾಯ 94: ಅಲ್ ಇನ್‌ಶಿರಾಹ್ (ವಿಸ್ತರಣೆ) ಸೂಕ್ತ : 1 (ದೂತರೇ,) ನಿಮಗಾಗಿ ನಾವು ನಿಮ್ಮ ಮನಸ್ಸನ್ನು ವಿಸ್ತರಿಸಿಲ್ಲವೇ? ಸೂಕ್ತ : 2 ಮತ್ತು ನಾವು ನಿಮ್ಮ ಮೇಲಿಂದ ನಿಮ್ಮ ಭಾರವನ್ನು ಇಳಿಸಿಲ್ಲವೇ? ಸೂಕ್ತ : 3 ಅದು ನಿಮ್ಮ ಬೆನ್ನು ಮುರಿಯುವಂತಹ ಭಾರವಾಗಿತ್ತು. ಸೂಕ್ತ : 4 ನಾವು ನಿಮ್ಮ ಪ್ರಸಿದ್ಧಿಯನ್ನು ಉನ್ನತಿಗೇರಿಸಲಿಲ್ಲವೇ? ಸೂಕ್ತ : 5 ಖಂಡಿತವಾಗಿಯೂ, ಕಷ್ಟದ ಜೊತೆಗೇ ಸುಖವಿದೆ. ಸೂಕ್ತ : 6 ಖಂಡಿತವಾಗಿಯೂ, ಕಷ್ಟದ ಜೊತೆಗೇ ಸುಖವಿದೆ. ಸೂಕ್ತ : 7 ನೀವಿನ್ನು ನಿಮಗೆ ಬಿಡುವು ಸಿಕ್ಕಾಗ (ಅಲ್ಲಾಹನನ್ನು ಮೆಚ್ಚಿಸುವ) ಶ್ರಮದಲ್ಲಿ ತೊಡಗಿರಿ. ಸೂಕ್ತ : 8 ಮತ್ತು ನಿಮ್ಮ ಒಡೆಯನತ್ತ ಗಮನ ಹರಿಸಿರಿ. (via) Quran in Kannada(ಕನ್ನಡದಲ್ಲಿ ಕುರ್ ಆನ್) app https://play.google.com/store/apps/details?id=com.nzymic.kquran
More Episodes
ಅಧ್ಯಾಯ 114: ಅನ್ನಾಸ್ (ಮಾನವರು) ಸೂಕ್ತ : 1 ಹೇಳಿರಿ; ನಾನು ಮಾನವರ ಒಡೆಯ (ಅಲ್ಲಾಹ)ನಲ್ಲಿ ರಕ್ಷಣೆ ಕೋರುತ್ತೇನೆ. ಸೂಕ್ತ : 2 ಅವನು (ಅಲ್ಲಾಹನು) ಮಾನವರ ದೊರೆ, ಸೂಕ್ತ : 3 ಮಾನವರ ಆರಾಧ್ಯ. ಸೂಕ್ತ : 4 (ಮನಸ್ಸಿನಲ್ಲಿ) ಗೊಂದಲ ಬಿತ್ತಿ ಹಿಂದೆ ಸರಿದು ಬಿಡುವವನ (ಶೈತಾನನ) ಕೆಡುಕಿನಿಂದ (ನಾನು ಅಲ್ಲಾಹನ ರಕ್ಷಣೆ ಕೋರುತ್ತೇನೆ). ಸೂಕ್ತ : 5 ಅವನು ಮಾನವರ...
Published 04/14/21
Published 04/14/21
ಅಧ್ಯಾಯ 113: ಅಲ್ ಫಲಕ್(ಮುಂಜಾವು) ಸೂಕ್ತ : 1 ಹೇಳಿರಿ; ನಾನು, ಪ್ರಭಾತದ ಒಡೆಯ (ಅಲ್ಲಾಹ)ನಲ್ಲಿ ರಕ್ಷಣೆ ಕೋರುತ್ತೇನೆ - ಸೂಕ್ತ : 2 ಅವನು ಸೃಷ್ಟಿಸಿರುವ ಎಲ್ಲವುಗಳ ಕೆಡುಕಿನಿಂದ (ಸುರಕ್ಷಿತನಾಗಿರಲು) ಸೂಕ್ತ : 3 ಮತ್ತು ಕತ್ತಲೆಯು ಆವರಿಸುವಾಗ, ಅದರ ಕೆಡುಕಿನಿಂದ (ರಕ್ಷಣೆ ಕೋರುತ್ತೇನೆ) ಸೂಕ್ತ : 4 ಮತ್ತು ಗಂಟುಗಳಲ್ಲಿ ಊದುವ (ಮಂತ್ರವಾದಿ) ಮಹಿಳೆಯರ...
Published 04/14/21