Episodes
ಅಧ್ಯಾಯ 114: ಅನ್ನಾಸ್ (ಮಾನವರು) ಸೂಕ್ತ : 1 ಹೇಳಿರಿ; ನಾನು ಮಾನವರ ಒಡೆಯ (ಅಲ್ಲಾಹ)ನಲ್ಲಿ ರಕ್ಷಣೆ ಕೋರುತ್ತೇನೆ. ಸೂಕ್ತ : 2 ಅವನು (ಅಲ್ಲಾಹನು) ಮಾನವರ ದೊರೆ, ಸೂಕ್ತ : 3 ಮಾನವರ ಆರಾಧ್ಯ. ಸೂಕ್ತ : 4 (ಮನಸ್ಸಿನಲ್ಲಿ) ಗೊಂದಲ ಬಿತ್ತಿ ಹಿಂದೆ ಸರಿದು ಬಿಡುವವನ (ಶೈತಾನನ) ಕೆಡುಕಿನಿಂದ (ನಾನು ಅಲ್ಲಾಹನ ರಕ್ಷಣೆ ಕೋರುತ್ತೇನೆ). ಸೂಕ್ತ : 5 ಅವನು ಮಾನವರ ಮನದಲ್ಲಿ ಗೊಂದಲಗಳನ್ನು ಬಿತ್ತುತ್ತಾನೆ. ಸೂಕ್ತ : 6 ಅಂಥವನು ಜಿನ್ನ್‌ಗಳ ಪೈಕಿ ಇರಬಹುದು ಮತ್ತು ಮಾನವರ ಪೈಕಿಯೂ ಇರಬಹುದು. (via) Quran in Kannada(ಕನ್ನಡದಲ್ಲಿ ಕುರ್ ಆನ್) app ...
Published 04/14/21
Published 04/14/21
ಅಧ್ಯಾಯ 113: ಅಲ್ ಫಲಕ್(ಮುಂಜಾವು) ಸೂಕ್ತ : 1 ಹೇಳಿರಿ; ನಾನು, ಪ್ರಭಾತದ ಒಡೆಯ (ಅಲ್ಲಾಹ)ನಲ್ಲಿ ರಕ್ಷಣೆ ಕೋರುತ್ತೇನೆ - ಸೂಕ್ತ : 2 ಅವನು ಸೃಷ್ಟಿಸಿರುವ ಎಲ್ಲವುಗಳ ಕೆಡುಕಿನಿಂದ (ಸುರಕ್ಷಿತನಾಗಿರಲು) ಸೂಕ್ತ : 3 ಮತ್ತು ಕತ್ತಲೆಯು ಆವರಿಸುವಾಗ, ಅದರ ಕೆಡುಕಿನಿಂದ (ರಕ್ಷಣೆ ಕೋರುತ್ತೇನೆ) ಸೂಕ್ತ : 4 ಮತ್ತು ಗಂಟುಗಳಲ್ಲಿ ಊದುವ (ಮಂತ್ರವಾದಿ) ಮಹಿಳೆಯರ ಕೆಡುಕಿನಿಂದ ಸೂಕ್ತ : 5 ಮತ್ತು ಅಸೊಯೆ ಪಡುವವನು ಅಸೊಯೆ ಪಡುವಾಗ, ಅವನ ಕೆಡುಕಿನಿಂದ (ರಕ್ಷಣೆ ಕೋರುತ್ತೇನೆ). (via) Quran in Kannada(ಕನ್ನಡದಲ್ಲಿ ಕುರ್ ಆನ್) app https://play.google.com/store/apps/details?id=com.nzymic.kquran
Published 04/14/21
ಅಧ್ಯಾಯ 112: ಅಲ್ ಇಖ್ಲಾಸ್ (ಏಕಾಗ್ರತೆ) ಸೂಕ್ತ : 1 ಹೇಳಿರಿ; ಅವನು ಅಲ್ಲಾಹು ಏಕಮಾತ್ರನು (ಅದ್ವಿತೀಯನು) ಸೂಕ್ತ : 2 ಅಲ್ಲಾಹನು ಎಲ್ಲ ಅಗತ್ಯಗಳಿಂದ ಮುಕ್ತನು. ಸೂಕ್ತ : 3 ಅವನಿಗೆ ಯಾರೂ ಜನಿಸಿಲ್ಲ ಅವನು ಯಾರಿಗೂ ಜನಿಸಿದವನಲ್ಲ. ಸೂಕ್ತ : 4 ಯಾರೂ ಅವನಿಗೆ ಸರಿಸಾಟಿಯಾಗಲು ಸಾಧ್ಯವಿಲ್ಲ. (via) Quran in Kannada(ಕನ್ನಡದಲ್ಲಿ ಕುರ್ ಆನ್) app https://play.google.com/store/apps/details?id=com.nzymic.kquran
Published 04/14/21
ಅಧ್ಯಾಯ 111: ಅಲ್ ಲಹಬ್ (ಜ್ವಾಲೆ) ಸೂಕ್ತ : 1 ಮುರಿದು ಹೋದವು, ಅಬೂಲಹಬ್‌ನ ಎರಡೂ ಕೈಗಳು ಮತ್ತು ಅವನು ನಾಶವಾದನು. ಸೂಕ್ತ : 2 ಅವನ ಸಂಪತ್ತಿನಿಂದಾಗಲಿ ಸಂಪಾದನೆಯಿಂದಾಗಲಿ ಅವನಿಗೆ ಯಾವುದೇ ಲಾಭವಾಗಲಿಲ್ಲ, ಸೂಕ್ತ : 3 ಬೇಗನೇ ಅವನು ಜ್ವಾಲೆಯುಗುಳುವ ಬೆಂಕಿಯನ್ನು ಪ್ರವೇಶಿಸುವನು, ಸೂಕ್ತ : 4 ಮತ್ತು ಉರುವಲು ಹೊರುವ (ಜನರನ್ನು ಪ್ರಚೋದಿಸುವ) ಅವನ ಮಡದಿ. ಸೂಕ್ತ : 5 ಅವಳ ಕೊರಳಲ್ಲಿ ಖರ್ಜೂರದೆಲೆಯ ಪಾಶವಿರುವುದು. (via) Quran in Kannada(ಕನ್ನಡದಲ್ಲಿ ಕುರ್ ಆನ್) app https://play.google.com/store/apps/details?id=com.nzymic.kquran
Published 04/14/21
ಅಧ್ಯಾಯ 110: ಅನ್ನಸ್ರ್ (ಸಹಾಯ) ಸೂಕ್ತ : 1 ಅಲ್ಲಾಹನ ಸಹಾಯ ಮತ್ತು ವಿಜಯವು ಬಂದಾಗ ಸೂಕ್ತ : 2 ಮತ್ತು ಜನರು ಸಮೂಹಗಳಾಗಿ ಅಲ್ಲಾಹನ ಧರ್ಮದೊಳಗೆ ಪ್ರವೇಶಿಸುವುದನ್ನು ನೀವು ಕಂಡಾಗ, ಸೂಕ್ತ : 3 ನಿಮ್ಮೊಡೆಯನ ಪ್ರಶಂಸೆಯೊಂದಿಗೆ, ಅವನ ಗುಣಗಾನ ಮಾಡಿರಿ ಮತ್ತು ಅವನಿಂದ ಕ್ಷಮೆ ಯಾಚಿಸಿರಿ. ಖಂಡಿತವಾಗಿಯೂ ಅವನು ಪದೇ ಪದೇ ಪಶ್ಚಾತ್ತಾಪ ಸ್ವೀಕರಿಸುವವನಾಗಿದ್ದಾನೆ. (via) Quran in Kannada(ಕನ್ನಡದಲ್ಲಿ ಕುರ್ ಆನ್) app https://play.google.com/store/apps/details?id=com.nzymic.kquran
Published 04/14/21
ಅಧ್ಯಾಯ 109: ಅಲ್‌ ಕಾಫಿರೂನ್ (ಧಿಕ್ಕಾರಿಗಳು) ಸೂಕ್ತ : 1 (ದೂತರೇ,) ಹೇಳಿರಿ; ಧಿಕ್ಕಾರಿಗಳೇ, ಸೂಕ್ತ : 2 ನೀವು ಪೂಜಿಸುತ್ತಿರುವುದನ್ನು ನಾನು ಪೂಜಿಸುವುದಿಲ್ಲ. ಸೂಕ್ತ : 3 ಮತ್ತು ನಾನು ಪೂಜಿಸುವಾತನನ್ನು ನೀವು ಪೂಜಿಸುವುದಿಲ್ಲ. ಸೂಕ್ತ : 4 ಇನ್ನು ನಾನಂತು ನೀವು ಪೂಜಿಸುತ್ತಿರುವವುಗಳನ್ನು ಪೂಜಿಸಲಾರೆ. ಸೂಕ್ತ : 5 ಮತ್ತು ನೀವು ಕೂಡಾ ನಾನು ಪೂಜಿಸುವಾತನನ್ನು ಪೂಜಿಸಲಾರಿರಿ. ಸೂಕ್ತ : 6 ನಿಮ್ಮ ಧರ್ಮ ನಿಮಗೆ ಮತ್ತು ನನ್ನ ಧರ್ಮ ನನಗೆ. (via) Quran in Kannada(ಕನ್ನಡದಲ್ಲಿ ಕುರ್ ಆನ್) app https://play.google.com/store/apps/details?id=com.nzymic.kquran
Published 04/14/21
ಅಧ್ಯಾಯ 108: ಅಲ್ ಕೌಸರ್ (ಸಮೃದ್ಧಿ) ಸೂಕ್ತ : 1 (ದೂತರೇ,) ಖಂಡಿತವಾಗಿಯೂ ನಾವು (ಅಲ್ಲಾಹ್) ನಿಮಗೆ ‘ಕೌಸರ್’ ನೀಡಿದ್ದೇವೆ. ಸೂಕ್ತ : 2 ನೀವಿನ್ನು ನಿಮ್ಮೊಡೆಯನಿಗಾಗಿ ನಮಾಝ್ ಸಲ್ಲಿಸಿರಿ ಮತ್ತು ಬಲಿದಾನ ನೀಡಿರಿ. ಸೂಕ್ತ : 3 ಖಂಡಿತವಾಗಿಯೂ ನಿಮ್ಮ ಶತ್ರುವೇ ನಿರ್ನಾಮವಾಗುವನು. (via) Quran in Kannada(ಕನ್ನಡದಲ್ಲಿ ಕುರ್ ಆನ್) app https://play.google.com/store/apps/details?id=com.nzymic.kquran
Published 04/14/21
ಅಧ್ಯಾಯ 107: ಅಲ್ ಮಾಊನ್ (ಸಣ್ಣ ನೆರವು) ಸೂಕ್ತ : 1 ನೀವು ಕಂಡಿರಾ, ಪ್ರತಿಫಲದ ದಿನವನ್ನು ಸುಳ್ಳೆಂದು ತಿರಸ್ಕರಿಸುವಾತನನ್ನು ? ಸೂಕ್ತ : 2 ಅವನೇ, ಅನಾಥನನ್ನು ದೂರ ದಬ್ಬುವವನು. ಸೂಕ್ತ : 3 ಮತ್ತು ಬಡವನಿಗೆ ಉಣಿಸುವುದಕ್ಕೆ ಪ್ರೇರಣೆ ಕೊಡದವನು. ಸೂಕ್ತ : 4 (ಈ ರೀತಿ) ನಮಾಝ್ ಸಲ್ಲಿಸುವವರಿಗೆ ಶಾಪವಿದೆ; ಸೂಕ್ತ : 5 ಅವರು, ತಮ್ಮ ನಮಾಝ್‌ನ ವಿಷಯದಲ್ಲಿ ಉದಾಸೀನ ತಾಳಿದ್ದಾರೆ. ಸೂಕ್ತ : 6 ಅವರು ಡಂಬಾಚಾರ ಮಾಡುತ್ತಾರೆ. ಸೂಕ್ತ : 7 ಮತ್ತು ತೀರಾ ಸಣ್ಣ ನೆರವನ್ನೂ ತಡೆಹಿಡಿಯುತ್ತಾರೆ. (via) Quran in Kannada(ಕನ್ನಡದಲ್ಲಿ ಕುರ್ ಆನ್) app ...
Published 04/14/21
ಅಧ್ಯಾಯ 106: ಕುರೈಶ್ (ಕುರೈಶರು) ಸೂಕ್ತ : 1 (ಅಲ್ಲಾಹನು) ಕುರೈಶರನ್ನು ಪರಿಚಿತಗೊಳಿಸಿದ್ದಕ್ಕಾಗಿ, ಸೂಕ್ತ : 2 ಅವರಿಗೆ ಚಳಿಗಾಲ ಮತ್ತು ಬೇಸಿಗೆ ಕಾಲದ ಪ್ರಯಾಣವನ್ನು ಪರಿಚಿತಗೊಳಿಸಿದ್ದಕ್ಕಾಗಿ. ಸೂಕ್ತ : 3 ಅವರು ಈ ಭವನ (ಕಅ್'ಬಃ)ದ ಒಡೆಯ (ಅಲ್ಲಾಹ)ನನ್ನು ಪೂಜಿಸಲಿ. ಸೂಕ್ತ : 4 ಅವನೇ, ಅವರು ಹಸಿದಿದ್ದಾಗ ಅವರಿಗೆ ಉಣಿಸಿದವನು ಮತ್ತು ಭಯದಿಂದ (ರಕ್ಷಿಸಿ) ಅವರಿಗೆ ಶಾಂತಿ ಒದಗಿಸಿದವನು. (via) Quran in Kannada(ಕನ್ನಡದಲ್ಲಿ ಕುರ್ ಆನ್) app https://play.google.com/store/apps/details?id=com.nzymic.kquran
Published 04/14/21
ಅಧ್ಯಾಯ 105: ಅಲ್ ಫೀಲ್ (ಆನೆ) ಸೂಕ್ತ : 1 ನೀವು ಕಂಡಿಲ್ಲವೇ, ನಿಮ್ಮೊಡೆಯನು ಆನೆಯವರಿಗೆ ಏನು ಮಾಡಿದನೆಂದು? ಸೂಕ್ತ : 2 ಅವನು ಅವರ ಯೋಜನೆಯನ್ನು ವಿಫಲಗೊಳಿಸಲಿಲ್ಲವೇ? ಸೂಕ್ತ : 3 ಮತ್ತು ಅವನು ಅವರ ವಿರುದ್ಧ ಪಕ್ಷಿಗಳ ಪಡೆಗಳನ್ನು ಕಳುಹಿಸಿದನು. ಸೂಕ್ತ : 4 ಅವು ಅವರ ಮೇಲೆ ‘ಸಿಜ್ಜೀಲ್’ (ಬೆಂದ ಆವೆ ಮಣ್ಣಿನ ಹರಳು) ಕಲ್ಲುಗಳನ್ನು ಎಸೆಯುತ್ತಿದ್ದವು. ಸೂಕ್ತ : 5 ಕೊನೆಗೆ ಅವನು ಅವರನ್ನು ತಿಂದು ಕರಗಿದ ಹುಲ್ಲಿನಂತಾಗಿಸಿ ಬಿಟ್ಟನು. (via) Quran in Kannada(ಕನ್ನಡದಲ್ಲಿ ಕುರ್ ಆನ್) app https://play.google.com/store/apps/details?id=com.nzymic.kquran
Published 04/14/21
ಅಧ್ಯಾಯ 104: ಅಲ್ ಹುಮಝಃ (ಮೂದಲಿಸುವವನು) ಸೂಕ್ತ : 1 ವಿನಾಶ ಕಾದಿದೆ, ಜನರನ್ನು (ಅವರ ಮುಂದೆ) ಮೂದಲಿಸುವ ಮತ್ತು (ಅವರ ಬೆನ್ನ ಹಿಂದೆ) ದೂಷಿಸುವ, ಪ್ರತಿಯೊಬ್ಬನಿಗೆ. ಸೂಕ್ತ : 2 ಅವನು, ಸಂಪತ್ತನ್ನು ಸಂಗ್ರಹಿಸಿಟ್ಟು ಎಣಿಸುತ್ತಿರುತ್ತಾನೆ. ಸೂಕ್ತ : 3 ತನ್ನ ಸಂಪತ್ತು ತನ್ನನ್ನು ಚಿರಂಜೀವಿಯಾಗಿಸಿ ಬಿಡುತ್ತದೆಂದು ಅವನು ಗ್ರಹಿಸುತ್ತಾನೆ. ಸೂಕ್ತ : 4 ಖಂಡಿತ ಇಲ್ಲ. ನಿಜವಾಗಿ ಅವನು ‘ಹುತಮಃ’ದಲ್ಲಿ ಎಸೆಯಲ್ಪಡುವನು. ಸೂಕ್ತ : 5 ಮತ್ತು, ‘ಹುತಮಃ’ ಅಂದರೇನೆಂದು ನಿಮಗೇನು ಗೊತ್ತು? ಸೂಕ್ತ : 6 ಅದು ಅಲ್ಲಾಹನು ಉರಿಸಿದ ಬೆಂಕಿ. ಸೂಕ್ತ : 7 ಅದು ಹೃದಯಗಳನ್ನೂ ತಲುಪುವುದು. ಸೂಕ್ತ : 8 ಅದನ್ನು ಅವರ...
Published 04/14/21
ಅಧ್ಯಾಯ 103: ಅಲ್ ಅಸ್ರ್ (ಕಾಲ) ಸೂಕ್ತ : 1 ಕಾಲದಾಣೆ. ಸೂಕ್ತ : 2 ಮನುಷ್ಯನು ಖಂಡಿತ ನಷ್ಟದಲ್ಲಿದ್ದಾನೆ. ಸೂಕ್ತ : 3 ನಂಬಿಕೆ ಇರಿಸಿದ, ಒಳ್ಳೆಯ ಕೆಲಸಗಳನ್ನು ಮಾಡಿದ ಮತ್ತು ಪರಸ್ಪರರಿಗೆ ಸತ್ಯವನ್ನು ಬೋಧಿಸಿದ ಮತ್ತು ಸಹನೆಯನ್ನು ಬೋಧಿಸಿದವರ ಹೊರತು. (via) Quran in Kannada(ಕನ್ನಡದಲ್ಲಿ ಕುರ್ ಆನ್) app https://play.google.com/store/apps/details?id=com.nzymic.kquran
Published 04/14/21
ಅಧ್ಯಾಯ 102: ಅತ್ತಕಾಸುರ್ (ಅಧಿಕದ ಚಿಂತೆ) ಸೂಕ್ತ : 1 (ಮಾನವರೇ) ಹೆಚ್ಚೆಚ್ಚು ಗಳಿಸುವ ಸ್ಪರ್ಧೆಯು ನಿಮ್ಮನ್ನು ಮೈಮರೆಸಿದೆ. ಸೂಕ್ತ : 2 ನೀವು ನಿಮ್ಮ ಗೋರಿಗಳನ್ನು ಕಾಣುವವರೆಗೂ (ಇದು ಮುಂದುವರಿಯಲಿದೆ). ಸೂಕ್ತ : 3 ಹಾಗಲ್ಲ, ನಿಮಗೆ ಬೇಗನೇ ತಿಳಿಯಲಿದೆ. ಸೂಕ್ತ : 4 ಖಂಡಿತ ಹಾಗಲ್ಲ, ನಿಮಗೆ ಬೇಗನೇ ತಿಳಿಯಲಿದೆ. ಸೂಕ್ತ : 5 ಹಾಗಲ್ಲ, ನಿಮಗೆ ಖಚಿತವಾದ ಜ್ಞಾನದೊಂದಿಗೆ (ಈ ವಿಷಯವು) ತಿಳಿದಿದ್ದರೆ ಚೆನ್ನಾಗಿತ್ತು. ಸೂಕ್ತ : 6 ನೀವು ನರಕವನ್ನು ಖಂಡಿತ ಕಾಣುವಿರಿ. ಸೂಕ್ತ : 7 ಮತ್ತೆ, ನಂಬಿಕೆ ತುಂಬಿದ ಕಣ್ಣುಗಳಿಂದ ನೀವು ಅದನ್ನು ಖಂಡಿತ ಕಾಣುವಿರಿ. ಸೂಕ್ತ : 8 ಕೊನೆಗೆ ಆ ದಿನ ನಿಮ್ಮೊಡನೆ, ನಿಮಗೆ...
Published 04/14/21
ಅಧ್ಯಾಯ 101: ಅಲ್ ಕ್ವಾರಿಅಃ (ಭಾರೀ ಆಘಾತ) ಸೂಕ್ತ : 1 ಭಾರೀ ಆಘಾತ. ಸೂಕ್ತ : 2 ಏನದು, ಭಾರೀ ಆಘಾತ? ಸೂಕ್ತ : 3 ಆ ಭಾರೀ ಆಘಾತವೇನೆಂದು, ನಿಮಗೇನು ಗೊತ್ತು? ಸೂಕ್ತ : 4 ಅಂದು ಜನರು ಚದರಿದ ಹಾತೆಗಳಂತಾಗುವರು. ಸೂಕ್ತ : 5 ಮತ್ತು ಪರ್ವತಗಳು, ಪುಡಿಗಟ್ಟಿದ ಉಣ್ಣೆ ಯಂತಾಗುವವು. ಸೂಕ್ತ : 6 ಇನ್ನು, ಯಾರ (ಒಳಿತುಗಳ) ತಕ್ಕಡಿ ಅಂದು ಭಾರವಾಗಿರುವುದೋ - ಸೂಕ್ತ : 7 - ಅವನು ಸಂತೃಪ್ತನಾಗಿ ಸುಖ ಭೋಗದಲ್ಲಿರುವನು. ಸೂಕ್ತ : 8 ಮತ್ತು ಯಾರ ತಕ್ಕಡಿ ಅಂದು ಹಗುರವಾಗಿರುವುದೋ - ಸೂಕ್ತ : 9 - ತಳವಿಲ್ಲದ ಹೊಂಡವೇ ಅವನ ನೆಲೆಯಾಗಿ ಬಿಡುವುದು. ಸೂಕ್ತ : 10 ಅದೇನೆಂದು ನಿಮಗೇನು ಗೊತ್ತು? ಸೂಕ್ತ : 11 ಅದು...
Published 04/14/21
ಅಧ್ಯಾಯ 100: ಅಲ್ ಆದಿಯಾತ್ (ಓಡುವವುಗಳು) ಸೂಕ್ತ : 1 ಏದುಸಿರು ಬಿಡುತ್ತಾ ಓಡುವ ಕುದುರೆಗಳಾಣೆ. ಸೂಕ್ತ : 2 ಅವು ಕಿಡಿ ಹಾರಿಸುತ್ತವೆ. ಸೂಕ್ತ : 3 ಮುಂಜಾವಿನ ಹೊತ್ತು ಅವು ಧಾಳಿ ಮಾಡಿ ಬಿಡುತ್ತವೆ. ಸೂಕ್ತ : 4 ಅವು ಧೂಳೆಬ್ಬಿಸಿ ಬಿಡುತ್ತವೆ. ಸೂಕ್ತ : 5 ಮತ್ತು ಶತ್ರುಗಳ ಪಡೆಗಳೊಳಗೆ ನುಗ್ಗಿ ಬಿಡುತ್ತವೆ. ಸೂಕ್ತ : 6 ಮನುಷ್ಯನು ಖಂಡಿತ ತನ್ನ ಒಡೆಯನಿಗೆ ಕೃತಘ್ನನಾಗಿದ್ದಾನೆ. ಸೂಕ್ತ : 7 ಇದಕ್ಕೆ ಖಂಡಿತ ಅವನೇ ಸಾಕ್ಷಿಯಾಗಿದ್ದಾನೆ. ಸೂಕ್ತ : 8 ಅವನು ಸಂಪತ್ತನ್ನು ತುಂಬಾ ಪ್ರೀತಿಸುತ್ತಾನೆ. ಸೂಕ್ತ : 9 ಅವನಿಗೆ ತಿಳಿದಿಲ್ಲವೇ, ಗೋರಿಗಳೊಳಗೆ ಇರುವವರನ್ನೆಲ್ಲಾ ಹೊರ ತೆಗೆಯಲಾಗುವ ದಿನದ...
Published 04/14/21
ಅಧ್ಯಾಯ 99: ಅಝ್ಝಿಲ್‌ಝಾಲ್ (ಕಂಪನ) ಸೂಕ್ತ : 1 ಭೂಮಿಯು ಭೂಕಂಪದಿಂದ ಕಂಪಿಸುವಾಗ, ಸೂಕ್ತ : 2 ಮತ್ತು ಭೂಮಿಯು ತನ್ನ ಹೊರೆಯನ್ನೆಲ್ಲಾ ಹೊರ ಚೆಲ್ಲುವಾಗ, ಸೂಕ್ತ : 3 ಮತ್ತು ಮಾನವನು - ಇದಕ್ಕೇನಾಗಿ ಬಿಟ್ಟಿದೆ? ಎನ್ನುವಾಗ, ಸೂಕ್ತ : 4 ಅಂದು ಅದು (ಭೂಮಿಯು) ತನ್ನ ಸಮಾಚಾರಗಳನ್ನೆಲ್ಲಾ ತಿಳಿಸಿ ಬಿಡುವುದು. ಸೂಕ್ತ : 5 ಏಕೆಂದರೆ, ನಿಮ್ಮ ಒಡೆಯನು (ಹಾಗೆ ಮಾಡಲು) ಅದಕ್ಕೆ ಆದೇಶಿಸಿರುವನು. ಸೂಕ್ತ : 6 ಅಂದು ಜನರು ಗುಂಪು ಗುಂಪಾಗಿ ಹೊರಬರುವರು - ಅವರ ಕರ್ಮಗಳನ್ನು ಅವರಿಗೆ ತೋರಿಸಲಿಕ್ಕಾಗಿ. ಸೂಕ್ತ : 7 ಕಿಂಚಿತ್ತಾದರೂ ಒಳಿತನ್ನು ಮಾಡಿದವನು ಅದನ್ನು ಕಾಣುವನು. ಸೂಕ್ತ : 8 ಮತ್ತು ಕಿಂಚಿತ್ತಾದರೂ...
Published 04/14/21
ಅಧ್ಯಾಯ 98: ಅಲ್ ಬಯ್ಯಿನಃ (ಸ್ಪಷ್ಟ ಪುರಾವೆ) ಸೂಕ್ತ : 1 ಗ್ರಂಥದವರ ಮತ್ತು ಬಹುದೇವಾರಾಧಕರ ಪೈಕಿ ಧಿಕ್ಕಾರಿಗಳು, ತಮ್ಮ ಬಳಿಗೆ ಸ್ಪಷ್ಟ ಪುರಾವೆಯು ಬಂದು ಬಿಡುವ ತನಕ (ತಮ್ಮ ಧೋರಣೆಯನ್ನು) ಕೈ ಬಿಡುವವರಾಗಿರಲಿಲ್ಲ. ಸೂಕ್ತ : 2 (ಇದೀಗ) ಪಾವನ ಹೊತ್ತಗೆಯನ್ನು (ಗ್ರಂಥವನ್ನು) ಓದಿ ಕೇಳಿಸುವ, ಅಲ್ಲಾಹನ ದೂತರು (ಅವರ ಬಳಿಗೆ ಬಂದಿರುವರು). ಸೂಕ್ತ : 3 ಅದರಲ್ಲಿ ಖಚಿತ ಆದೇಶಗಳು ಲಿಖಿತವಾಗಿವೆ. ಸೂಕ್ತ : 4 (ಈ ಹಿಂದೆಯೂ) ಗ್ರಂಥದವರು, ತಮ್ಮ ಬಳಿಗೆ ಸ್ಪಷ್ಟವಾದ ಪುರಾವೆಗಳು ಬಂದ ಬಳಿಕವಷ್ಟೇ, ಛಿನ್ನ ಭಿನ್ನರಾಗಿದ್ದರು. ಸೂಕ್ತ : 5 ನಿಷ್ಠೆಯನ್ನು ಅವನಿಗೇ (ಅಲ್ಲಾಹನಿಗೇ) ಮೀಸಲಾಗಿಟ್ಟು, ಏಕಾಗ್ರತೆಯೊಂದಿಗೆ...
Published 04/14/21
ಅಧ್ಯಾಯ 97: ಅಲ್ ಕದ್ರ್ (ನಿರ್ಣಾಯಕ) ಸೂಕ್ತ : 1 ನಾವು ಇದನ್ನು ನಿರ್ಣಾಯಕ ರಾತ್ರಿಯಲ್ಲಿ ಇಳಿಸಿಕೊಟ್ಟಿರುವೆವು. ಸೂಕ್ತ : 2 ನಿರ್ಣಾಯಕ ರಾತ್ರಿ ಎಂದರೇನೆಂದು ನಿಮಗೇನು ಗೊತ್ತು? ಸೂಕ್ತ : 3 ಆ ನಿರ್ಣಾಯಕ ರಾತ್ರಿಯು ಸಾವಿರ ತಿಂಗಳುಗಳಿಗಿಂತ ಶ್ರೇಷ್ಠವಾಗಿದೆ. ಸೂಕ್ತ : 4 ಅದರಲ್ಲಿ ಮಲಕ್‌ಗಳು ಮತ್ತು ರೂಹ್ (ಜಿಬ್ರೀಲ್) ತಮ್ಮ ಒಡೆಯನ ಆದೇಶದಂತೆ, ಎಲ್ಲ ಏರ್ಪಾಡುಗಳೊಂದಿಗೆ ಇಳಿದು ಬರುತ್ತಾರೆ. ಸೂಕ್ತ : 5 ಶಾಂತಿಯಾಗಿರುತ್ತದೆ - ಅದು, ಬೆಳಗಿನ ಉದಯದ ತನಕ. (via) Quran in Kannada(ಕನ್ನಡದಲ್ಲಿ ಕುರ್ ಆನ್) app https://play.google.com/store/apps/details?id=com.nzymic.kquran
Published 04/14/21
ಅಧ್ಯಾಯ 96: ಅಲ್‌ ಅಲಕ್ (ರಕ್ತ ಪಿಂಡ) ಸೂಕ್ತ : 1 ಓದಿರಿ, (ವಿಶ್ವವನ್ನು) ಸೃಷ್ಟಿಸಿದ ನಿಮ್ಮೊಡೆಯನ ಹೆಸರಿಂದ. ಸೂಕ್ತ : 2 ಅವನು ಮನುಷ್ಯನನ್ನು ಹೆಪ್ಪು ಗಟ್ಟಿದ ರಕ್ತದಿಂದ ಸೃಷ್ಟಿಸಿರುವನು. ಸೂಕ್ತ : 3 ಓದಿರಿ. ಮಹಾ ಉದಾರಿಯಾದ ನಿಮ್ಮೊಡೆಯನ ಹೆಸರಿಂದ. ಸೂಕ್ತ : 4 ಅವನು ಲೇಖನಿಯ ಮೂಲಕ ಕಲಿಸಿದನು. ಸೂಕ್ತ : 5 ಮತ್ತು ಮಾನವನಿಗೆ ತಿಳಿದಿಲ್ಲದ್ದನ್ನು ಕಲಿಸಿದನು.* ಸೂಕ್ತ : 6 ಆದರೆ ಮನುಷ್ಯನು ಮಾತ್ರ ವಿದ್ರೋಹವೆಸಗುತ್ತಾನೆ. ಸೂಕ್ತ : 7 ಅವನು ತನ್ನನ್ನು ತೀರಾ ಸ್ವತಂತ್ರನಾಗಿ ಕಾಣುತ್ತಾನೆ. ಸೂಕ್ತ : 8 ಖಂಡಿತ (ಎಲ್ಲರೂ) ನಿಮ್ಮ ಒಡೆಯನ ಕಡೆಗೇ ಮರಳ ಬೇಕಾಗಿದೆ. ಸೂಕ್ತ : 9 ನೀವು ನೋಡಿದಿರಾ,...
Published 04/14/21
ಅಧ್ಯಾಯ 95: ಅತ್ತೀನ್ (ಅಂಜೂರ) ಸೂಕ್ತ : 1 ಅಂಜೂರದಾಣೆ ಹಾಗೂ ಝೈತೂನ್‌ನ ಆಣೆ. ಸೂಕ್ತ : 2 ಸೀನೀನ್ (ಸಿನಾಯ್) ಪರ್ವತದಾಣೆ. ಸೂಕ್ತ : 3 ಮತ್ತು ಈ ಪ್ರಶಾಂತ ನಗರ (ಮಕ್ಕಃ)ದಾಣೆ. ಸೂಕ್ತ : 4 ನಾವು ಮನುಷ್ಯನನ್ನು ಅತ್ಯುತ್ತಮ ಸ್ಪರೂಪದಲ್ಲಿ ಸೃಷ್ಟಿಸಿರುವೆವು. ಸೂಕ್ತ : 5 ಆ ಬಳಿಕ ನಾವು ಅವನನ್ನು ತೀರಾ ಕೆಳಮಟ್ಟಕ್ಕೆ ಮರಳಿಸಿದೆವು. ಸೂಕ್ತ : 6 ವಿಶ್ವಾಸಿಗಳಾದವರು ಹಾಗೂ ಸತ್ಕರ್ಮಗಳನ್ನು ಮಾಡುವವರ ಹೊರತು - ಅವರಿಗೆ ಅಪಾರ ಪ್ರತಿಫಲವಿದೆ. ಸೂಕ್ತ : 7 (ಮಾನವನೇ,) ಇಷ್ಟಾಗಿಯೂ ನೀನು ಪ್ರತಿಫಲದ ದಿನವನ್ನು ತಿರಸ್ಕರಿಸುವುದೇಕೆ? ಸೂಕ್ತ : 8 ಎಲ್ಲ ತೀರ್ಪುಗಾರರಿಗಿಂತ ದೊಡ್ಡ ತೀರ್ಪುಗಾರನು...
Published 04/14/21
ಅಧ್ಯಾಯ 94: ಅಲ್ ಇನ್‌ಶಿರಾಹ್ (ವಿಸ್ತರಣೆ) ಸೂಕ್ತ : 1 (ದೂತರೇ,) ನಿಮಗಾಗಿ ನಾವು ನಿಮ್ಮ ಮನಸ್ಸನ್ನು ವಿಸ್ತರಿಸಿಲ್ಲವೇ? ಸೂಕ್ತ : 2 ಮತ್ತು ನಾವು ನಿಮ್ಮ ಮೇಲಿಂದ ನಿಮ್ಮ ಭಾರವನ್ನು ಇಳಿಸಿಲ್ಲವೇ? ಸೂಕ್ತ : 3 ಅದು ನಿಮ್ಮ ಬೆನ್ನು ಮುರಿಯುವಂತಹ ಭಾರವಾಗಿತ್ತು. ಸೂಕ್ತ : 4 ನಾವು ನಿಮ್ಮ ಪ್ರಸಿದ್ಧಿಯನ್ನು ಉನ್ನತಿಗೇರಿಸಲಿಲ್ಲವೇ? ಸೂಕ್ತ : 5 ಖಂಡಿತವಾಗಿಯೂ, ಕಷ್ಟದ ಜೊತೆಗೇ ಸುಖವಿದೆ. ಸೂಕ್ತ : 6 ಖಂಡಿತವಾಗಿಯೂ, ಕಷ್ಟದ ಜೊತೆಗೇ ಸುಖವಿದೆ. ಸೂಕ್ತ : 7 ನೀವಿನ್ನು ನಿಮಗೆ ಬಿಡುವು ಸಿಕ್ಕಾಗ (ಅಲ್ಲಾಹನನ್ನು ಮೆಚ್ಚಿಸುವ) ಶ್ರಮದಲ್ಲಿ ತೊಡಗಿರಿ. ಸೂಕ್ತ : 8 ಮತ್ತು ನಿಮ್ಮ ಒಡೆಯನತ್ತ ಗಮನ...
Published 04/14/21
ಅಧ್ಯಾಯ 93: ಅಲ್‌ಲುಹಾ (ಬಿಸಿಲೇರುವ ಸಮಯ) ಸೂಕ್ತ : 1 ಬಿಸಿಲೇರುವ ಸಮಯದಾಣೆ. ಸೂಕ್ತ : 2 ಇರುಳು ಆವರಿಸುವಾಗಿನಾಣೆ. ಸೂಕ್ತ : 3 (ದೂತರೇ,) ನಿಮ್ಮ ಒಡೆಯನು ನಿಮ್ಮನ್ನು ತೊರೆದಿಲ್ಲ ಮತ್ತು ಅವನು ನಿಮ್ಮಿಂದ ಮುನಿದು ಕೊಂಡಿಲ್ಲ. ಸೂಕ್ತ : 4 ನಿಮ್ಮ ಪಾಲಿಗೆ ಅನಂತರದ್ದು ಮೊದಲಿನದಕ್ಕಿಂತ (ಪರಲೋಕವು ಇಹಲೋಕಕ್ಕಿಂತ) ಉತ್ತಮವಾಗಿದೆ. ಸೂಕ್ತ : 5 ಶೀಘ್ರವೇ ನಿಮ್ಮೊಡೆಯನು, ನೀವು ಸಂತೃಪ್ತರಾಗುವಷ್ಟನ್ನು ನಿಮಗೆ ನೀಡುವನು. ಸೂಕ್ತ : 6 ನೀವು ಅನಾಥರಾಗಿದ್ದುದನ್ನು ಕಂಡು ಅವನು ನಿಮಗೆ ಆಶ್ರಯ ನೀಡಿರಲಿಲ್ಲವೇ? ಸೂಕ್ತ : 7 ನೀವು ದಾರಿ ತಿಳಿಯದವರಾಗಿದ್ದುದನ್ನು ಕಂಡು ಅವನು ನಿಮಗೆ ದಾರಿ ತೋರಲಿಲ್ಲವೇ? ಸೂಕ್ತ :...
Published 04/14/21
ಅಧ್ಯಾಯ 92: ಅಲ್ಲೈಲ್ (ಇರುಳು) ಸೂಕ್ತ : 1 ರಾತ್ರಿಯಾಣೆ - ಅದು, ಅದನ್ನು (ಹಗಲನ್ನು) ಮರೆ ಮಾಚಿದಾಗ. ಸೂಕ್ತ : 2 ಹಗಲಿನಾಣೆ - ಅದು ಬೆಳಗಿದಾಗ. ಸೂಕ್ತ : 3 ಗಂಡು ಹಾಗೂ ಹೆಣ್ಣನ್ನು ಸೃಷ್ಟಿಸಿದವನಾಣೆ. ಸೂಕ್ತ : 4 ನಿಮ್ಮ ಶ್ರಮಗಳು ವಿವಿಧ ಬಗೆಯದ್ದಾಗಿವೆ. ಸೂಕ್ತ : 5 ದಾನ ಮಾಡಿದವನು ಹಾಗೂ ಧರ್ಮ ನಿಷ್ಠನಾಗಿರುವವನು. ಸೂಕ್ತ : 6 ಮತ್ತು ಒಳಿತನ್ನು ಸಮರ್ಥಿಸಿದವನು - ಸೂಕ್ತ : 7 - ಅವನ ಪಾಲಿಗೆ ನಾವು ಸರಳವಾದ ಮಾರ್ಗವನ್ನು ಸುಲಭ ಗೊಳಿಸುವೆವು. ಸೂಕ್ತ : 8 ಮತ್ತು ಜಿಪುಣತೆ ತೋರಿದ ಹಾಗೂ ನಿರ್ಲಕ್ಷಿಸಿದವನು. ಸೂಕ್ತ : 9 ಮತ್ತು ಒಳಿತನ್ನು ತಿರಸ್ಕರಿಸಿದವನು - ಸೂಕ್ತ : 10 - ಅವನ ಪಾಲಿಗೆ ನಾವು...
Published 04/14/21
ಅಧ್ಯಾಯ 91: ಅಶ್ಶಮ್ಸ್ (ಸೂರ್ಯ) ಸೂಕ್ತ : 1 ಸೂರ್ಯನ ಹಾಗೂ ಅದರ ಬೆಳಕಿನಾಣೆ. ಸೂಕ್ತ : 2 ಮತ್ತು ಅದರ (ಸೂರ್ಯನ) ಬೆನ್ನಿಗೇ ಉದಯಿಸುವ ಚಂದ್ರನಾಣೆ. ಸೂಕ್ತ : 3 ಮತ್ತು ಹಗಲಿನ ಹಾಗೂ ಅದು ಅನಾವರಣಗೊಳ್ಳುವಾಗಿನ ಆಣೆ. ಸೂಕ್ತ : 4 ಅದನ್ನು ಮರೆ ಮಾಚಿಬಿಡುವ ರಾತ್ರಿಯಾಣೆ. ಸೂಕ್ತ : 5 ಆಕಾಶದ ಹಾಗೂ ಅದನ್ನು ನಿರ್ಮಿಸಿದವನಾಣೆ. ಸೂಕ್ತ : 6 ಭೂಮಿಯ ಹಾಗೂ ಅದನ್ನು ಹರಡಿದವನಾಣೆ. ಸೂಕ್ತ : 7 ಮನುಷ್ಯ ಚಿತ್ತದ ಹಾಗೂ ಅದನ್ನು ರೂಪಿಸಿದವನಾಣೆ. ಸೂಕ್ತ : 8 ಆ ಬಳಿಕ ಅದಕ್ಕೆ ದುಷ್ಟತನದ ಹಾಗೂ ಧರ್ಮ ನಿಷ್ಠೆಯ ಅರಿವು ನೀಡಿದವನಾಣೆ. ಸೂಕ್ತ : 9 ಅದನ್ನು ನಿರ್ಮಲವಾಗಿಟ್ಟವನು ವಿಜಯಿಯಾದನು. ಸೂಕ್ತ : 10 ಅದನ್ನು...
Published 04/14/21