ವಾಸ್ತುಶಿಲ್ಪ ಶಾಸ್ತ್ರ ಮತ್ತು ಸಂರಕ್ಷಣೆ. Traditional Indian Architecture & Conservation with Yashaswini Sharma.
Listen now
Description
ಆರ್ಕಿಟೆಕ್ಟ್ ಮತ್ತು ವಿದುಷಿ ಯಶಸ್ವಿನಿ ಶರ್ಮರವರು ಭಾರತೀಯ ವಾಸ್ತುಶಿಲ್ಪಿಶಾಸ್ತ್ರ, ನಗರ ವಿನ್ಯಾಸ ಮತ್ತು ಪ್ರಾಚೀನ ಕಟ್ಟಡಗಳ ಸಂರಕ್ಷಣೆಯ ಬಗ್ಗೆ ಮಾತನಾಡುತ್ತಾರೆ. Architect & Heritage Conservation Expert Yashaswini Sharma talks about pre-colonial Indian architecture and town planning and shares what it takes to recreate and preserve heritage structures in Bangalore. 'ಆರ್ಕಿಟೆಕ್ಚರ್' ಎಂಬ ಕ್ಷೇತ್ರ ಏನು ಹೊಸದಲ್ಲ. ಮನುಷ್ಯರು ಸಾವಿರಾರು ವರ್ಷಗಳಿಂದ ಮನೆ, ಕೋಟೆ, ನಗರ, ಮತ್ತು ದೇವಸ್ಥಾನಗಳನ್ನು ನಿರ್ಮಿಸುತ್ತಲಿದ್ದೀವಿ. ತಲೆ-ಹರಟೆ ಪಾಡ್ಕಾಸ್ಟಿನ 120ನೇ ಸಂಚಿಕೆಯಲ್ಲಿ, ಯಶಸ್ವಿನಿ ಶರ್ಮ ರವರು ಸೂರ್ಯ ಪ್ರಕಾಶ್ ಮತ್ತು ಪವನ್ ಶ್ರೀನಾಥ್ ಅವರ ಜೊತೆ ಮಾತನಾಡುತ್ತಾರೆ. ಈ ಸಂಚಿಕೆಯಲ್ಲಿ, ಯಶಸ್ವಿನಿ ಅವರು ಐತಿಹಾಸಿಕ ವಾಸ್ತುಶಿಲ್ಪಶಾಸ್ತ್ರವನ್ನು ಇಂದಿನ ಆರ್ಕಿಟೆಕ್ಚರ್ ಕೋರ್ಸ್‌ಗಳಲ್ಲಿ ಏಕೆ ಕಲಿಸಬೇಕು ಅಂತ ತಿಳಿಸುತ್ತಾರೆ, ಮತ್ತು ಏಕೆ ಆರ್ಕಿಟೆಕ್ಟ್ ಆಗುವವರು ಸಂಶೋಧನೆಯನ್ನೂ ಮಾಡಬೇಕೆಂದು ತಿಳಿಸಿಕೊಡುತ್ತಾರೆ. ಜೊತೆಗೆ, ಅವರೇ ವಿನ್ಯಾಸಮಾಡಿದ ಹೆಬ್ಬಾಳ ಕಿತ್ತಯ್ಯ-ಶಾಶನದ ಗಂಗಶೈಲಿಯ ಮಂಟಪ, ಎಚ್.ವಿ. ನಂಜುಂಡಯ್ಯ ರವರ ಮನೆಯ ಪುನಃಸ್ಥಾಪನೆ, ಹಾಗು ಮತ್ತಿತರ ಕೆಲಸಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಾರೆ. ಯಶಸ್ವಿನಿ ಶರ್ಮರವರು 'ಏಸ್ತೆಟಿಕ್ ಆರ್ಕಿಟೆಕ್ಟ್ಸ್' ಅನ್ನು ಸ್ಥಾಪಿಸಿದ್ದಾರೆ, ಮತ್ತು ಬೆಂಗಳೂರು ಮತ್ತು ಕರ್ನಾಟಕದಲ್ಲಿ ಹಲವಾರು ವಿನ್ಯಾಸ, ಸಂರಕ್ಷಣೆ, ಮತ್ತು ಪುನಃಸ್ಥಾಪನೆಯ ಯೋಜನೆಗಳು ಅವರ ನೇತೃತ್ವದಲ್ಲಿ ನಡೆಸುತ್ತಿದ್ದಾರೆ. ಅವರು ಕಾರ್ಡಿಫ್ ವಿಶ್ವವಿದ್ಯಾಲದಲ್ಲಿ ಎಂ.ಫಿಲ್. ಬೆಂಗಳೂರಿನ ಕಟ್ಟಡಗಳು ಮತ್ತು ನಗರ ಯೋಜನೆ ಮೇಲೆ ಮಾಡಿದ್ದಾರೆ. ಎಂ.ಫಿಲ್. ಕಾಲದಿಂದಲೂ ಜಗತ್ಪ್ರಸಿದ್ಧ ದೇವಾಲಯ ವಾಸ್ತು ತಜ್ಞ ಆಡಮ್ ಹಾರ್ಡಿ ರವರ ಸಹಯೋಗದಲ್ಲಿ ಅಧ್ಯಯನ ಮತ್ತು ಅಭ್ಯಾಸ ನಡೆಸುತ್ತಿದ್ದಾರೆ . Architecture is not a recent field of study, but as old as the first attempts by humans to build houses, cities, forts, temples and places of worship. On Episode 120 of the Thale-Harate Kannada Podcast, Yashaswini Sharma talks to hosts Surya Prakash BS and Pavan Srinath. She explains how traditional Indian architecture, its styles, and principles should be reintegrated with modern education in architecture and civil engineering. She also shares some glimpses of how the design was thought about in pre-Colonial Bangalore and Karnataka, what traditional texts survive to this day, and how researchers and scholars are rediscovering old architectural styles and norms. She also shares some examples of her work in heritage
More Episodes
2022 ರಲ್ಲಿ ಭಾರತೀಯರು ಕೇವಲ ಮದ್ಯಪಾನವನ್ನ ಸೇವಿಸುವುದಷ್ಟೇ ಅಲ್ಲ ಜೊತೆಗೆ ಅನೇಕ ಹೊಸ ಬ್ರಾಂಡ್‌ಗಳ ವಿಸ್ಕಿಗಳು, ಜಿನ್‌ಗಳು, ಬಿಯರ್‌ಗಳನ್ನು ನಮ್ಮ ದೇಶದಲ್ಲೇ ಉತ್ಪಾದಿಸುತ್ತಿದ್ದಾರೆ. ಪವನ್ ಶ್ರೀನಾಥ್ ಅವರು ಗಣೇಶ್ ಚಕ್ರವರ್ತಿ ಅವರೊಂದಿಗೆ ಮದ್ಯಪಾನ ಹೇಗೆ ತಯಾರಿಸಲಾಗುತ್ತದೆ, ಅವುಗಳ ಇತಿಹಾಸ ಮತ್ತು ಕಳೆದ 10-15 ವರ್ಷಗಳಲ್ಲಿ ಭಾರತೀಯ ಮದ್ಯ ಉದ್ಯಮವು ಹೇಗೆ...
Published 08/04/22
Published 08/04/22
ಕಪ್ಪೆಗಳ ಬಗ್ಗೆ ವಿಶೇಷ ಸಂಶೋಧನೆ ಮಾಡಿರುವ ಡಾ. ಗುರುರಾಜ ಕೆವಿ ಅವರು ಕಪ್ಪೆಗಳ ಸೌಂದರ್ಯ, ಅದ್ಭುತ ಮತ್ತು ಜೀವಶಾಸ್ತ್ರದ ಕುರಿತು ಪವನ್ ಶ್ರೀನಾಥ್ ಅವರೊಂದಿಗೆ ಮಾತನಾಡಿದ್ದಾರೆ. ಕಳೆದ 20 ವರ್ಷಗಳಲ್ಲಿ ಭಾರತದಲ್ಲಿ 200 ಕ್ಕೂ ಹೆಚ್ಚು ಹೊಸ ಜಾತಿಯ ಕಪ್ಪೆಗಳನ್ನು ಹೇಗೆ ಕಂಡುಹಿಡಿಯಲಾಗಿದೆ ಮತ್ತು ಮುಂಬರುವ ದಶಕಗಳಲ್ಲಿ ಇನ್ನಷ್ಟು ವಿಜ್ಞಾನವನ್ನು ಯಾವ ರೀತಿ...
Published 07/21/22