ಗುಪ್ತಚರ ಸಂಸ್ಥೆಗಳ ಸಾಂವಿಧಾನಿಕತೆ | Legitimacy of Intelligence Agencies ft. Aditya Sondhi
Listen now
Description
ಗುಪ್ತಚರ ಸಂಸ್ಥೆಗಳ ಕೆಲಸಗಳ ಕುರಿತು ಮತ್ತು ಅದರ ಕಾನೂನಿನ ಚೌಕಟ್ಟುಗಳ ಕುರಿತು ಹಿರಿಯ ವಕೀಲ ಆದಿತ್ಯ ಸೋಂಧಿ ಅವರು ನಿರೂಪಕರಾದಂತಹ ಸೂರ್ಯಪ್ರಕಾಶ್ ಬಿ.ಎಸ್ ಮತ್ತು ಗಣೇಶ್ ಚಕ್ರವರ್ತಿ ಅವರ ಜೊತೆ ಮಾತನಾಡಿದ್ದಾರೆ. Host Surya Prakash BS and Ganesh Chakravarthi talks to Aditya Sondhi on how intelligence agencies functions and its legal frameworks. ತಲೆ ಹರಟೆ ಕನ್ನಡ ಪಾಡ್ಕ್ಯಾಸ್ಟ್ ನ 138 ನೇ ಸಂಚಿಕೆಯಲ್ಲಿ ಗುಪ್ತಚರ ಸಂಸ್ಥೆಗಳ ಕೆಲಸಗಳ ಕುರಿತು ಮತ್ತು ಅದರ ಕಾನೂನಿನ ಚೌಕಟ್ಟುಗಳ ಕುರಿತು ಹಿರಿಯ ವಕೀಲ ಆದಿತ್ಯ ಸೋಂಧಿ ಅವರು ನಿರೂಪಕರಾದಂತಹ ಸೂರ್ಯಪ್ರಕಾಶ್ ಬಿ.ಎಸ್ ಮತ್ತು ಗಣೇಶ್ ಚಕ್ರವರ್ತಿ ಅವರ ಜೊತೆ ಮಾತನಾಡಿದ್ದಾರೆ. ಪೋಲೀಸರ ಕಾರ್ಯವು ಸಾರ್ವಜನಿಕ ವಲಯದಲ್ಲಿ ಚಿರಪರಿಚಿತವಾಗಿದೆ - ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಅವರ ಪಾತ್ರ, ಅವರ ಅಧಿಕಾರ ಇತ್ಯಾದಿ ಇವುಗಳ ಬಗ್ಗೆ ನಮಗೆಲ್ಲ ತಿಳಿದೇ ಇದೆ. ಅವರ ಚಟುವಟಿಕೆಗಳು ಮತ್ತು ಅದರ ಕಾನೂನು ಆಧಾರಗಳ ಬಗ್ಗೆ ಆರೋಗ್ಯಕರ ಚರ್ಚೆಗಳು ನಡೆಯುತ್ತಾ ಇರುತ್ತವೆ. ಭಾರತದ ಗುಪ್ತಚರ ಏಜೆನ್ಸಿಗಳು ಅಂದ್ರೆ ಉದಾಹರಣೆಗೆ ಇಂಟೆಲಿಜೆನ್ಸ್ ಬ್ಯೂರೋ (IB), ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (RAW) ಬಗ್ಗೆ ನಾಗರಿಕರಿಗೆ ಅಷ್ಟು ತಿಳುವಳಿಕೆ ಇಲ್ಲ. ಈ ಸಂಸ್ಥೆಗಳು ಭಯೋತ್ಪಾದನೆ, ಸೈಬರ್ ದಾಳಿ ಮುಂತಾದ ಅಪರಾಧಗಳನ್ನು ತಡೆಗಟ್ಟುವಲ್ಲಿ ಮತ್ತು ವಿಚಾರಣೆಗೆ ಒಳಪಡಿಸುವಲ್ಲಿ ಭಾರಿ ಪಾತ್ರವನ್ನು ವಹಿಸುವ ಮಾಹಿತಿಗಳನ್ನು ಸಂಗ್ರಹಿಸುತ್ತವೆ. ಆದ್ದರಿಂದ ಗುಪ್ತಚರ ಸಂಸ್ಥೆಗಳು ಪರಿಣಾಮಕಾರಿಯಾಗಿ, ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಕೇಂದ್ರವಾಗಿರಿಸಿಕೊಂಡು ಸಾಂವಿಧಾನಿಕ ಮತ್ತು ಕಾನೂನು ಚೌಕಟ್ಟಿನೊಳಗೆ ಕಾರ್ಯನಿರ್ವಹಿಸುವುದು ಮುಖ್ಯವಾಗಿದೆ. ಈ ಕ್ಷೇತ್ರದಲ್ಲಿ ಅಗಾಧವಾದ ಜ್ಞಾನವನ್ನು ಹೊಂದಿರುವ ಹಿರಿಯ ವಕೀಲ ಆದಿತ್ಯ ಸೋಂಧಿ ಅವರೊಂದಿಗಿನ ಹರಟೆಯನ್ನ ಕೇಳಿ. ಆದಿತ್ಯ ಸೋಂಧಿ ಅವರು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ, ಬೆಂಗಳೂರಿನ ವಿದ್ಯಾರ್ಥಿಯಾಗಿದ್ದರು ಮತ್ತು ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್‌ಡಿ ಕೂಡ ಪಡೆದಿದ್ದಾರೆ. ಬನ್ನಿ ಕೇಳಿ! In episode 138 of the Thale-Harate Kannada Podcast, Host Surya Prakash BS and Ganesh Chakravarthi talks to Aditya Sondhi on how intelligence agencies functions and its legal frameworks. The function of police i
More Episodes
2022 ರಲ್ಲಿ ಭಾರತೀಯರು ಕೇವಲ ಮದ್ಯಪಾನವನ್ನ ಸೇವಿಸುವುದಷ್ಟೇ ಅಲ್ಲ ಜೊತೆಗೆ ಅನೇಕ ಹೊಸ ಬ್ರಾಂಡ್‌ಗಳ ವಿಸ್ಕಿಗಳು, ಜಿನ್‌ಗಳು, ಬಿಯರ್‌ಗಳನ್ನು ನಮ್ಮ ದೇಶದಲ್ಲೇ ಉತ್ಪಾದಿಸುತ್ತಿದ್ದಾರೆ. ಪವನ್ ಶ್ರೀನಾಥ್ ಅವರು ಗಣೇಶ್ ಚಕ್ರವರ್ತಿ ಅವರೊಂದಿಗೆ ಮದ್ಯಪಾನ ಹೇಗೆ ತಯಾರಿಸಲಾಗುತ್ತದೆ, ಅವುಗಳ ಇತಿಹಾಸ ಮತ್ತು ಕಳೆದ 10-15 ವರ್ಷಗಳಲ್ಲಿ ಭಾರತೀಯ ಮದ್ಯ ಉದ್ಯಮವು ಹೇಗೆ...
Published 08/04/22
Published 08/04/22
ಕಪ್ಪೆಗಳ ಬಗ್ಗೆ ವಿಶೇಷ ಸಂಶೋಧನೆ ಮಾಡಿರುವ ಡಾ. ಗುರುರಾಜ ಕೆವಿ ಅವರು ಕಪ್ಪೆಗಳ ಸೌಂದರ್ಯ, ಅದ್ಭುತ ಮತ್ತು ಜೀವಶಾಸ್ತ್ರದ ಕುರಿತು ಪವನ್ ಶ್ರೀನಾಥ್ ಅವರೊಂದಿಗೆ ಮಾತನಾಡಿದ್ದಾರೆ. ಕಳೆದ 20 ವರ್ಷಗಳಲ್ಲಿ ಭಾರತದಲ್ಲಿ 200 ಕ್ಕೂ ಹೆಚ್ಚು ಹೊಸ ಜಾತಿಯ ಕಪ್ಪೆಗಳನ್ನು ಹೇಗೆ ಕಂಡುಹಿಡಿಯಲಾಗಿದೆ ಮತ್ತು ಮುಂಬರುವ ದಶಕಗಳಲ್ಲಿ ಇನ್ನಷ್ಟು ವಿಜ್ಞಾನವನ್ನು ಯಾವ ರೀತಿ...
Published 07/21/22