ಏಕಾಂಗಿ ಪಯಣ | Solo Travel in India ft. Ganesh Chakravarthi
Listen now
Description
ತಲೆ ಹರಟೆ ಕನ್ನಡ ಪಾಡ್ಕಾಸ್ಟ್ ನ 142 ನೇ ಸಂಚಿಕೆಯಲ್ಲಿ ನಿರೂಪಕರಾದ ಗಣೇಶ್ ಮತ್ತು ಪವನ್ ಭಾರತದಲ್ಲಿ ಏಕಾಂಗಿ ಪ್ರವಾಸದ ಕುರಿತು ಮಾತನಾಡುತ್ತಾರೆ ಜೊತೆಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. Hosts Ganesh Chakravarthi and Pavan Srinath explore the joys of solo traveling and share their experiences on Episode 142 of the Thale-Harate Kannada Podcast. *Update!* Thale-Harate now has its own YouTube channel! Featuring full episodes and more soon! Head over to youtube.com/haratepod, subscribe and hit the bell icon! ಪ್ರಯಾಣ ಮತ್ತು ಪ್ರವಾಸೋದ್ಯಮವನ್ನು ಸಾಮಾನ್ಯವಾಗಿ ಸ್ನೇಹಿತರು, ಕುಟುಂಬ ಅಥವಾ ಪ್ರೀತಿಪಾತ್ರರ ಜೊತೆ ಹೋಗುವ ಗುಂಪು ಚಟುವಟಿಕೆ ಎಂದು ಭಾವಿಸುತ್ತೇವೆ. ಚಿಕ್ಕಂದಿನಲ್ಲೇ ತಂದೆ-ತಾಯಂದಿರ ಜೊತೆ ಪ್ರವಾಸ ಆರಂಭಿಸುವುದರಿಂದ ಈ ಯೋಚನೆ ನಮ್ಮ ಮನಸ್ಸಲ್ಲಿ ಬೇರೂರಿದೆ. ಆದರೆ, ಏಕಾಂಗಿ ಪಯಣವು ತನ್ನದೇ ಆದ ಸಂತೋಷ ಮತ್ತು ಆಕರ್ಷಣೆಗಳನ್ನು ಹೊಂದಿದೆ ಮತ್ತು ನೀವು ಈ ಹಿಂದೆ ಹೋದಂತಹ ಊರಿಗೆ ಮತ್ತೆ ಭೇಟಿ ನೀಡುತ್ತಿದ್ದರೂ ಸಹ ಸಂಪೂರ್ಣವಾಗಿ ವಿಭಿನ್ನ ಅನುಭವವನ್ನು ನೀಡುತ್ತದೆ. ಗಣೇಶ್ ಅವರು ಥಾಣೆಯಿಂದ ಪವನ್‌ ಅವರ ಜೊತೆ ಮಾತನಾಡ್ತಾ ಇದ್ದಾರೆ, ಅಲ್ಲಿ ಅವರು ಪ್ರಸ್ತುತ ಪುಣೆ, ಮುಂಬೈ ಮತ್ತು ಇತರ ಊರುಗಳ ಪ್ರಯಾಣದ ಕೊನೆಯ ಹಂತದಲ್ಲಿದ್ದಾರೆ. ಗಣೇಶ್ ಸುಮಾರು 13 ವರ್ಷಗಳಿಂದ ಬೈಕಿಂಗ್ ಮಾಡುತ್ತಿದ್ದು, ತಮ್ಮ ಮೊದಲ ಬೈಕ್ ಖರೀದಿಸಿದ ಕೆಲವೇ ತಿಂಗಳಲ್ಲಿ ದಕ್ಷಿಣ ಭಾರತದ ಉದ್ದಗಲಕ್ಕೂ ಏಕಾಂಗಿಯಾಗಿ ಬೈಕ್ ಟ್ರಿಪ್ ಮಾಡಿದ್ದಾರೆ. ಸಂಚಿಕೆಯ ಮೊದಲಾರ್ಧದಲ್ಲಿ, ಗಣೇಶ್ ಬೈಕ್ ಪ್ರಯಾಣದ ಬಗ್ಗೆ ತಮ್ಮ ವೈಯಕ್ತಿಕ ಅನುಭವವನ್ನು ಹಂಚಿಕೊಂಡಿದ್ದಾರೆ ಜೊತೆಗೆ ಬೈಕರ್‌ಗಳು ಮತ್ತು ಪ್ರವಾಸಿಗರು ಪ್ರಯಾಣಿಸುವಾಗ ಏನನ್ನು ನಿರೀಕ್ಷಿಸಬೇಕು ಮತ್ತು ತಯಾರಿ ಹೇಗಿರಬೇಕು ಎಂದು ತಿಳಿಸಿದ್ದಾರೆ. ದ್ವಿತೀಯಾರ್ಧದಲ್ಲಿ, ಗಣೇಶ್ ಮತ್ತು ಪವನ್ ಇಬ್ಬರೂ ಹೊಸ ನಗರಗಳಿಗೆ ತಮ್ಮ ಭೇಟಿಯ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಬನ್ನಿ ಕೇಳಿ! ನೀವು ಎಲ್ಲಿಗಾದ್ರೂ ಏಕಾಂಗಿ ಪಯಣ ಮಾಡಿದ್ದೀರಾ? ಹಾಗಾದ್ರೆ, ಟ್ವಿಟ್ಟರ್ ಅಥವಾ ಇನ್ಸ್ಟಾಗ್ರಾಮ್ ನಲ್ಲಿ ನಮ್ಮ ಜೊತೆ ನಿಮ್ಮ ಅನುಭವವನ್ನು ಹಂಚಿಕೊಳ್ಳಿ! ಅಲ್ಲದೆ, ಭಾರತದಲ್ಲಿ ದೂರದೂರಿಗೆ ಬೈಕ್ ಜರ್ನಿ ಮಾಡೋ ಯೋಚನೆ ಇದ್ರೆ, ಆ ಕುರಿತು ಸಲಹೆಗಳಿಗಾಗಿ ಗಣೇಶ್ ಅವರನ್ನು ಕೇಳಲು ಮರೆಯಬೇಡಿ. Travel and
More Episodes
2022 ರಲ್ಲಿ ಭಾರತೀಯರು ಕೇವಲ ಮದ್ಯಪಾನವನ್ನ ಸೇವಿಸುವುದಷ್ಟೇ ಅಲ್ಲ ಜೊತೆಗೆ ಅನೇಕ ಹೊಸ ಬ್ರಾಂಡ್‌ಗಳ ವಿಸ್ಕಿಗಳು, ಜಿನ್‌ಗಳು, ಬಿಯರ್‌ಗಳನ್ನು ನಮ್ಮ ದೇಶದಲ್ಲೇ ಉತ್ಪಾದಿಸುತ್ತಿದ್ದಾರೆ. ಪವನ್ ಶ್ರೀನಾಥ್ ಅವರು ಗಣೇಶ್ ಚಕ್ರವರ್ತಿ ಅವರೊಂದಿಗೆ ಮದ್ಯಪಾನ ಹೇಗೆ ತಯಾರಿಸಲಾಗುತ್ತದೆ, ಅವುಗಳ ಇತಿಹಾಸ ಮತ್ತು ಕಳೆದ 10-15 ವರ್ಷಗಳಲ್ಲಿ ಭಾರತೀಯ ಮದ್ಯ ಉದ್ಯಮವು ಹೇಗೆ...
Published 08/04/22
Published 08/04/22
ಕಪ್ಪೆಗಳ ಬಗ್ಗೆ ವಿಶೇಷ ಸಂಶೋಧನೆ ಮಾಡಿರುವ ಡಾ. ಗುರುರಾಜ ಕೆವಿ ಅವರು ಕಪ್ಪೆಗಳ ಸೌಂದರ್ಯ, ಅದ್ಭುತ ಮತ್ತು ಜೀವಶಾಸ್ತ್ರದ ಕುರಿತು ಪವನ್ ಶ್ರೀನಾಥ್ ಅವರೊಂದಿಗೆ ಮಾತನಾಡಿದ್ದಾರೆ. ಕಳೆದ 20 ವರ್ಷಗಳಲ್ಲಿ ಭಾರತದಲ್ಲಿ 200 ಕ್ಕೂ ಹೆಚ್ಚು ಹೊಸ ಜಾತಿಯ ಕಪ್ಪೆಗಳನ್ನು ಹೇಗೆ ಕಂಡುಹಿಡಿಯಲಾಗಿದೆ ಮತ್ತು ಮುಂಬರುವ ದಶಕಗಳಲ್ಲಿ ಇನ್ನಷ್ಟು ವಿಜ್ಞಾನವನ್ನು ಯಾವ ರೀತಿ...
Published 07/21/22